ಏಲ್ಲಿರುವೆ ಮಾನವ ಕಾಡುವ ರೂಪಸಿಯೆ

ಇದುವರೆಗೂ ಒಂದೇ ಒಂದೂ ಹುಡುಗಿಗೂ I LOVE U ಅನ್ನಲಿಕ್ಕೆ ಅಗಿಲ್ವಾಲ್ಲಪ್ಪ..ಇದೂ ಒಂದು ಗಂಡು ಜೀವನನಾ ಥೂ ನನ್ನ ಜನ್ಮಕ್ಕೇ..ಎಷ್ಟೊಂದು ಚೆಂದ ಚೆಂದದ್ ಹುಡುಗಿಯರಿದ್ರು ಎಲ್ಲಾ ಮಿಸ್ ಆಗಿ ಮಿಸ್ಸಸ್ಸೂ ಆಗೋದ್ರೂ..ಛೇ ಛೇ ಯಾಕೆ ಹೀಗಾಗ್ಬಿಟ್ಟೆ ...ಇರ್ಲಿ ಇನ್ನು ಈ ಜೀವನದಲ್ಲಿ ಯಾರಿಗೂ I LOVE U ಅನ್ನ ಬಾರದು.. ಅಂದ್ರೆ ಅದು ನನ್ನ ಹೆಂಡತಿಗೆ ಮಾತ್ರ...ಅನ್ಕೋಂಡು...ಏಲ್ಲಿರುವೆ ಮಾನವ ಕಾಡುವ ರೂಪಸಿಯೆ..ಹಾಡು ಹೇಳ್ಕೋಂಡು ಇದ್ದೇ..
.
.
....ಹೀಗೆ ಇರುವಾಗ ಮೊನ್ನೆ ಒಂದು ಮದುವೆ ಮನೆಯಲ್ಲಿ ಅವಳು ಸಿಕ್ಕಿದ್ದು! ಅವ್ಳಿಗೆ ಇನ್ನೂ ಮದ್ವೆ ಅಗಿರ್ಲಿಲ್ಲ, ಹಳೆ ಹುಡುಗಿ ಹೆಸರು ಕೊನೆಯಲ್ಲಿ ಹೇಳ್ತೇನೆ ok.... ಒಂದು ಸ್ಮೈಲ್ smile emoticon ಮಾಡಿ ಹತ್ರ ಹೋದೆ..ಏನ್ರೀ ಹೇಗಿದ್ದೀರಾ ಅಂದೆ ..ಚೆನ್ನಾಗಿದ್ದೀನಿ ನೀವು? ಅಂದ್ಲು .ನಾನೂ ಚೆನ್ನಾಗಿದ್ದೀನಿ ಅಂತಾ ಹೇಳಿ ಅದು ಇದು ಮಾತಾಡ್ಲಿಕ್ಕೆ ಶುರು ಮಾಡ್ಡೆ..ಮಾತಾಡ್ತಾ ಮಾತಾಡ್ತಾ ಒಂದು ವಿಷ್ಯ ಅಂದೆ..ಹೇಳಿ ಅಂದ್ಲು..ಕೈಯಲ್ಲಿ ಹೂ ಇಲ್ಲ ಚಾಕೋಲೇಟು ಇಲ್ಲ ಆದ್ರೂ ಈ ಸಮಯ ಮತ್ತೆ ಸಿಗೋಲ್ಲ ಅಂತ ಯೋಚನೆ ಮಾಡಿ I LOVE U ರೀ..ಅಂದೆ ಬಿಟ್ಟೆ! .. ಅದಕ್ಕೆ ಅವಳೂ ಏನೂ ಹೇಳದೇ ಸ್ವಲ್ಪ ಮೌನಿ ಯಾಗ್ಬಿಟ್ಳು...ಏನಾದ್ರೂ ಹೇಳಿ ಪ್ಲೀಸ್ ಅಂದೆ.... ಸಾರಿ ರೀ ನನಗೆ ನಿಮ್ಮ ಮೇಲೆ ಆ ರೀತಿಯ ಭಾವನೆಗಳೇ ಇಲ್ಲಾ ಅಂದು ಬಿಟ್ಲು!....ಜೀವನದಲ್ಲಿ ಮೊದಲನೇ ಸಾರಿ I LOVE U ಅಂದೆ..ಬೇರೆ ಹುಡುಗರಂತೆ ಕಂಡ ಕಂಡ ಹುಡುಗಿಯರಿಗೆಲ್ಲ ಹೇಳಿದವನಲ್ಲ ನಾನು...ಅದನ್ನೂ ಅವಳು ರಿಜೆಕ್ಟ್ ಮಾಡಿ ಬಿಟ್ಳಲ್ಲ ತುಂಬಾ ಬೇಸರವಾಯ್ತು ಛೇ ನಾನೂ ಎಲ್ಲಾ ಹುಡುಗರ ಹಾಗೆ ಯಾಕಾದೇ!...ಆ ಕ್ಷಣಕ್ಕೆ,.. ಇನ್ನು ಬದುಕಬಾರದು ಅನ್ನಿಸ್ತು.... ಕಣ್ಣಲ್ಲಿ ನೀರು ಬಂದಿತ್ತು! ಅಮ್ಮನ ಕೈ ನನ್ನ ಭುಜ ಅಮಕ್ತು..!
.
.
.
.
ಮಲಗಿದಲ್ಲಿಂದ ಎಚ್ಚರವಾದಮೇಲೆ ಅಯ್ಯೋ ಇದು ಬರೀ ಕನಸು! ಅಂತ ಗೊತ್ತಾಗಿ ಬಾರಿ ಖುಷಿ!... ಮತ್ತೆ ಅದೇ ಹಾಡು... ಏಲ್ಲಿರುವೆ ಮಾನವ ಕಾಡುವ ರೂಪಸಿಯೆ..wink emoticon