ಕಂಜೂಸು


ಏರಡು ಮೂರು ವರ್ಷಗಳ ಹಿಂದೆ ಬರೆದಿಟ್ಟ ಚುಟುಕು ಇದು ಮೊನ್ನೆ ಯಾವುದೋ ನೋಟ್ ಬುಕ್ಕಲ್ಲಿ ಸಿಕ್ತು ಸ್ವಲ್ಪ ಬದಲಾಯಿಸಿ ಪೋಸ್ಟ್ ಮಾಡಿದ್ದೇನೆ.
.
ನನಗೆ ನೆನಪಿದೆ 2004 ನಲ್ಲಿ ಬೆಂಗಳೂರಿಗೆ ಕಾಲಿಟ್ಟಾಗ ಬರೀ 2000 ರೂ ಇತ್ತೂ. ಆ ಮೊದಲ ಏರಡು ವರ್ಷದ ಒದ್ದಾಟ ಈಗಲೂ ಮರೆಯಲಾಗಲ್ಲ. ಹಿರಿಯರು ಚಿನ್ನದ ಕಿರೀಟ ಬಿಟ್ಟು ಹೋದರೆ ಜೀವನ ಸುಲಭ .ಬರೀ ಜವಾಬ್ದಾರಿಗಳನ್ನ ಬಿಟ್ಟು ಹೋದರೆ ಜೀವನ ತುಂಬಾ ಕಠಿಣವಾಗಿರುತ್ತೆ.. ಹೇಗೋ ಒಂದು ಒಳ್ಳೆ ಕೆಲಸ ಸಿಕ್ತು, ಆದ್ರೂ ಮನೆಯ ಜವಾಬ್ದಾರಿಗಳಿಂದ ಮುಕ್ತಿ ಪಡೆಯುವ ವರೆಗೂ ಜಿಪುಣತನ ಮಾಡಲೇ ಬೇಕಿತ್ತು ! ಸ್ನೇಹಿತರಿರೋ ಹಲವು ಬಾರಿ ಕಂಜೂಸು ಅಂತ್ತಿದ್ರು, ಆದರೂ ಅದರ ಬಗ್ಗೆ ಯೋಚಿಸುವ ಪರಿಸ್ಥಿತಿಯಲ್ಲಿ ನಾನಿರಲಿಲ್ಲ. ಜಿಪುಣತನವೂ ಹಾಗೆ ಬಡವರಿಗೆ ಬೇಗ ಒಗ್ಗಿ ಬಿಡುತ್ತೇ,..! ಮೂರು ನಾಲ್ಕು ಸಾರಿ ಸಾಲ ಕೊಟ್ಟ ಮೇಲೆ ಸ್ನೇಹಿತರು ಕಂಜೂಸು ಅನ್ನೋದು ನಿಲ್ಲಿಸಿದರು..wink emoticon ನೀ ಮಾಡೋದೇ ಸರಿ ಕಣೋ ಅನ್ನಲು ಪ್ರಾರಂಬಿಸಿದ್ರೂ. ಆ ಹಿಂದಿನ ಕಂಜೂಸುತನ ಈಗಿಲ್ಲ, ಆದ್ರೂ ಪೂರ್ತಿಯಾಗಿ ಕಡಿಮೆನೂ ಆಗಿಲ್ಲ wink emoticon. ತುಂಬಾ ಕಂಜೂಸತನ ಮಾಡಿ ಬಿಟ್ನಾ ಅಂದುಕೊಂಡ ದಿನ ಸ್ವಲ್ಪ ಹೆಚ್ಚೇ ಖರ್ಚಾಗಿಬಿಡುತ್ತೇ, ಆ ದಿನ ಸ್ವಲ್ಪ ಹೆಚ್ಚೇ ಖುಷಿ ಯಾಗಿರ್ತೆನೆ.!
.
ಮದ್ಯಮ ವರ್ಗದವರಿಗೆ ಒಂದು ಮಾತು.. ತಿಂಗಳ ಮೊದಲಲ್ಲಿ ಕಂಜೂಸುತನ ಮಾಡಿದರೆ ತಿಂಗಳ ಕೊನೆಯಲ್ಲಿ ಕೇನ್ ಜ್ಯೂಸ್ ಕುಡಿಬಹುದು ಹಾಗೆ ಜೀವನದಲ್ಲಿ ಶಕ್ತಿ ಇದ್ದಾಗ ಸ್ವಲ್ಪ ಕೂಡಿಟ್ಟರೆ ಕೊನೆಯಲ್ಲಿ ನಮಗೂ ಹಾಗೂ ಕುಟುಂಬದವರಿಗೂ ನೆಮ್ಮದಿ ಸಿಗುವುದು.
.
ಕೆಲವರು ನಾನು ತುಂಬಾ ರಿಸರ್ವ್ಡ್ ಅಂತ ಹೇಳ್ತಾರೆ ನಿಜ ಹೇಳಬೇಕು ಅಂದ್ರೆ ಅವರು ಅವರಿಗೆ ತಿಳಿಯದಂತೆ ಕಂಜೂಸುಗಳಾಗಿರ್ತಾರೆ..ಹಾಗೆನೆ ಕಂಜೂಸುಗಳೂ ರಿಸರ್ವ್ಡ್ ಅಗಿರ್ತಾರೆ..! ಕೆಲವು ಜನ ಕೈನಲ್ಲಿ ಕೋಟಿ ಕೋಟಿ ಹಣ ಇದ್ದರೂ ಕಂಜೂಸುತನ ಮಾಡ್ತಾರೆ ಅದೇಕೋ ಗೊತ್ತಿಲ್ಲ.
.
ನಾ ಕಂಡಂತೆ ಇನ್ನೊಂದು ಮುಖ್ಯವಾದ ವಿಷಯ ಅಂದ್ರೆ ಈ ಪ್ರಪಂಚದಲ್ಲಿ ಸ್ವಾರ್ಥಿಗಳು ಕಂಜೂಸ್ಗಳಂತೆ ಕಂಡರೂ ಕಂಜೂಸ್ಗಳಿಗಿಂತ ತುಂಬಾ ಡೆಂಜರ್ ಅವರು ತಮ್ಮ ಕುಟುಂಬದವರಿಗೂ ಸಂಕಟಪ್ರಾಯರು, ಕಂಜೂಸುಗಳಲ್ಲಿ ಮೋಸಗಾರರು ತೀರಾ ವಿರಳ! ಸ್ವಾರ್ಥಿಗಳಲ್ಲ ಅನಿಸಿದರೆ ನೀವು ಅವರನ್ನ ನಂಬಬಹುದು, ಅವರು ಯಾವುದನ್ನೂ ಅನಪೇಕ್ಷಿತವಾಗಿ ಹಾಳುಮಾಡುವುದಿಲ್ಲ ಶ್ರಮದ ಮಹತ್ವ ಗೊತ್ತಿರುತ್ತೆ. ಪೋಷಕರ ಕಂಜೂಸಿನಲ್ಲಿ ಮಕ್ಕಳ ಭವಿಷ್ಯದ ಬಗ್ಗೆ ಪ್ರೀತಿ ಇರುತ್ತೆ ಅದು ತ್ಯಾಗದ ಒಂದು ರೂಪ!...ಇನ್ನೂ ಏನೇನೋ ಇದೆ ....

No comments:

Post a Comment

ನಿಮ್ಮ ಅಭಿಪ್ರಾಯಗಳನ್ನು ದಯಪಾಲಿಸಿ..:)